ಕುಂದಾಪುರ ತಾಲ್ಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿನ ಬ್ರಹ್ಮಸ್ಥಾನದಲ್ಲಿ ಅಪೂರ್ವ ಕಿರುಶಿಲ್ಪಗಳು ಪತ್ತೆಯಾಗಿವೆ. ಇವು ಭಾರತದಲ್ಲಿ ಪ್ರಥಮ ಬಾರಿಗೆ ಕಂಡುಬಂದಿರುವ ಬೃಹತ್ ಶಿಲಾಯುಗದ ಕಲ್ಲಿನ ಶಿಲ್ಪ ಎಂದು ಶಿರ್ವದ ಮೂಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ಪ್ರೊ. ಎಲ್. ಮುರುಗೇಶಿ ಹೇಳುತ್ತಾರೆ.
ಇದರ ಸಮೀಪದಲ್ಲಿರುವ ನೈಸರ್ಗಿಕ ಬಂಡೆಗಲ್ಲಿನ ಮೇಲಿರುವ ಕೊರೆದು ಮಾಡಿರುವ ಚಿತ್ರಗಳನ್ನು ಡಾ. ಬಿ. ವಸಂತ ಶೆಟ್ಟಿ ಹಾಗೂ ಡಾ. ಅ. ಸುಂದರ ಅಧ್ಯಯನ ಮಾಡಿ ಆ ಚಿತ್ರಗಳನ್ನು ಕಬ್ಬಿಣ ಯುಗದ್ದೆಂದು ದೃಢಪಡಿಸಿದ್ದಾರೆ.
ಆ ಚಿತ್ರದಲ್ಲಿರುವ ನಂದಿಯನ್ನು ಹೋಲುವ ಈ ಕಿರುಶಿಲ್ಪಗಳು ಭಾರತೀಯ ಪುರಾತತ್ವ ಅಧ್ಯಯನದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ತುಳುನಾಡಿನ ಮಕ್ಕೆಕಟ್ಟೆಯಲ್ಲಿರುವ ಶಿಲ್ಪಗಳು ಹಾಗೂ ಕೆಲದೈವಗಳು ನಾಗಾರಾಧನೆಯ ಅಧ್ಯಯನಕ್ಕೂ ಈ ಶಿಲ್ಪ ಶೋಧನೆಗಳು ಹೊಸ ತಿರುವು ನೀಡಿದ್ದು, ತುಳು ಜಾನಪದದ ಬಗೆಹರಿಸಲಾಗದ ಅನೇಕ ಪ್ರಶ್ನೆಗಳಿಗೆ ಖಚಿತ ಉತ್ತರ ನೀಡಬಹುದು ಎಂಬುದು ಪ್ರೊ. ಮುರುಗೇಶಿ ಅಭಿಪ್ರಾಯ.
ಈ ಸಂಶೋಧನೆಯಲ್ಲಿ ಶಿರ್ವ ಸುರೇಂದ್ರ ಶೆಟ್ಟಿ ಹಾಗೂ ಕಲ್ಯಾಣಪುರ ಶ್ರೀಧರ ಭಟ್ ಕೂಡಾ ಸಹಕಾರ ನೀಡಿದ್ದಾರೆ.
ಸಂಯುಕ್ತ ಕರ್ನಾಟಕ: ಜ. 25, 2008
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ